Affiliate Marketing ನಿಂದ 1 ಕೋಟಿ ದುಡ್ಡು ಮಾಡಿದ ಈ 16 ವರ್ಷದ ಹುಡುಗ | Make Money From Affiliate Marketing

 ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆ ಮಾತಿಗೆ, ಇವತ್ತು ನೀವು ತಿಳಿದು ಕೊಳ್ಳಲಿರುವ ವ್ಯಕ್ತಿಯ ಜೀವನವೇ ಪರ್ಫೆಕ್ಟ್ Example . ಈ ಹುಡುಗನ ದೇಹ ನೋಡೋಕ್ಕೆ ತುಂಬಾ ದಪ್ಪ. ಆದ ಕಾರಣ ಈತನಿಗೆ ಶಾಲೆಯಲ್ಲಿ ಎಲ್ಲ ಹುಡುಗರು ಈತನನ್ನ ಆನೆ, ಮೋಟು ಈತರ ಅನೇಕ ಹೆಸರು ಗಳಿಂದ ಚಿಡಾಯಿಸುತ್ತಿದ್ರು. ಈ ಮಾತು ಸ್ವತಃ Umer qureshi ಅವರೇ ಅನೇಕ ಇಂಟರ್ವ್ಯೂ ನಲ್ಲಿ ಎಲ್ಲರ ಮುಂದೆ ಹೇಳ್ಕೊಂಡಿದ್ದಾರೆ.

ಈತನ್ನನು ನೋಡಿ ಜನರು ಇವನಿಗೆ ಬರೀ ತಿನ್ನೋದು ಉಣ್ಣೊದು ಬಿಟ್ರೆ ಬೇರೆ ಕೆಲಸ ಇಲ್ವೇನೋ ಅಂತ ಅನ್ಕೋತಿದ್ರು. ಈತರ ಎಲ್ಲ ನೆಗೆಟಿವ್ ಮಾತುಗಳಿಂದ ಆತ ಒಂದು ದಿನ ಕುಳಿತು ಯೋಚ್ನೆ ಮಾಡ್ತಾನೆ, ನಾನು ಏನ್ ಮಾಡಿದ್ರೆ ಜನ ನನ್ನನ್ನ ಗೌರವಿಸುತ್ತೆ. ನಾನು  ಏನ್ ಮಾಡ್ಬೇಕು ಯಾವ ಕೆಲಸ ಕೂಡ ನನಗೆ ಬರುವುದಿಲ್ಲ ಎಂದು ಭಾವಿಸಿದ. 


Umer qureshi ಮಾಹಿತಿ : ವಯಸ್ಸು, ಮೌಲ್ಯ, ಆದಾಯ:

Umer qureshi ತನ್ನ ಮನೆಯಿಂದ ಹೊರಗೆ ಹೋದಾಗೆಲ್ಲ ಜನ ಆತನನ್ನ ಚಿಡಾಯಿಸುತ್ತಿದ್ದನ್ನು  ನೋಡಿ ಆತ ಮನೆಯಿಂದ ಹೊರಗೆ ಹೋಗೋದೇ ನಿಲ್ಲಿಸಿಬಿಟ್ಟ ಆತನ ತಂದೆ ತಾಯಿ ಇದನ್ನೆಲ್ಲಾ ನೋಡಿ ತಮ್ಮ ಮಗ ಏನ್ ಮಾಡಬಹುದು ಎನ್ನುವುದರ ಬಗ್ಗೆ ವಿಚಾರ ಮಾಡುತ್ತಿದ್ರೂ.

Umer qureshi ಅವರಿಗೆ ಚಿಕ್ಕವನಿಂದಲೇ Computer ಮತ್ತು Mobile ಗಳ ಬಗ್ಗೆ ತುಂಬಾ ಆಸಕ್ತಿ ಇತ್ತು. ತನಗೆ Computer ಚೆನ್ನಾಗಿ ಉಪಯೋಗ ಮಾಡಿಕೊಳ್ಳಲು ಬಂದರೆ ಜನ ನನ್ನನು ಗೌರವಿಸುತ್ತಾರೆ ಮತ್ತೆ ಎಲ್ಲರ ಹಾಗೆ ನನ್ನ ಜೊತೆ ಕೂಡ ಮಾಡನಾಡ್ತಾರೆ ಅನ್ನೋ ನಂಬಿಕೆ ಇತ್ತು.

ಈ ಕಾರಣ umer qureshi ಅವರು  12ನೇ ವಯಸ್ಸಿನಲ್ಲೇ ಕೆಲಸ ಕೇಳಲು ತಮ್ಮ ನಗರದ ಸೈಬರ್ ಕೆಫೆ ಗೆ ಹೋಗಿ ಕೆಲಸ ಕೇಳಿದಾಗ ಯಾರು ಕೂಡ ಆತನನ್ನು ನಂಬಲೇ ಇಲ್ಲ. ಇಷ್ಟು ಚಿಕ್ಕ ಹುಡುಗ ಏನ್ ಕೆಲಸ ಮಾಡ್ತಾನೆ ಏನೋ ಅಂತ ಯಾರೂ ಆತನನ್ನು ಕೆಲಸಕ್ಕೆ ಸೇರಿಸಿ ಕೊಳ್ಳಲಿಲ್ಲ.

ಶಾಲೆಯಲ್ಲೂ ಕೂಡ ಎಲ್ಲ ಶಿಕ್ಷಕರೂ  ಕೂಡ ಆತನ್ನನ್ನು ಹಿಂದುಳಿದ ವಿದ್ಯಾರ್ಥಿ ಗಳಲ್ಲಿ ಪರಿಗಣಿಸುತ್ತಿದ್ದರು. ಮತ್ತು ಇವನು ಜೀವನ ದಲ್ಲಿ ಇದೆ ತರ ಹಿಂದೇ ಉಳಿಯುತ್ತಾನೆ ಎಂದು ಭಾವಿಸಿದರು.

2017 ರಲ್ಲಿ ಇಂಟರ್ನೆಟ್ ನ ಕ್ರಾಂತಿ ಉಂಟಾಯಿತು  ಮತ್ತೆ umer qureshi ಅವರ ತಂದೆ ತಾಯಿ ಆತನಿಗೆ ಒಂದು ಹೊಸ Mobile ಕೊಡಿಸಲು ನಿರ್ಧಾರ ಮಾಡಿದರು. ಆತ ದಿನಾಲು ಮೊಬೈಲ್ ನಲ್ಲಿ Online ನಿಂದ ದುಡ್ಡು ಹೇಗೆ ಮಾಡಬಹುದು ಎಂಬುದರ ವೀಡಿಯೋಸ್ ನೋಡುತ್ತಿದ್ದ. ಇದರಿಂದ ಆತನಿಗೆ Online ಮೂಲಕ ಹಣ ಮಾಡುವ ಸಾಕಷ್ಟು ವಿಧಾನ ಗಳ ಬಗ್ಗೆ Idea ಸಿಕ್ತು. ಇದರಿಂದಾಗಿ Umer Qureshi  ಅವರ ಆತ್ಮವಿಶ್ವಾಸ ಕೂಡ ಹೆಚ್ಚಾಯ್ತು.

umer qureshi  ಕೂಡ ಎಲ್ಲರ ಹಾಗೆ Youtube ನಲ್ಲಿ ನಾವು ಕೂಡ ಮನೆಯಲ್ಲೇ ಕುಳಿತು ವೀಡಿಯೋಸ್ ಮಾಡಿ Youtube ಗೆ ಹಾಕಿದ್ರೆ ಒಳ್ಳೆ ಹಣ ಬರುತ್ತೆ ಮತ್ತೆ ಜನ ಕೂಡ ನನ್ನನ್ನೂ ಎಲ್ಲರಂತೆ  ಗೌರವಿಸುತ್ತೆ ಎಂದು ಭಾವಿಸಿದರು.

ಒಂದು youtube ವಿಡಿಯೋ ದಿಂದ umer qureshi ಆನ್ಲೈನ್ ನಲ್ಲಿ ದುಡ್ಡು ಮಾಡುವ 2 ವೀಧಾನ ಗಳ ಬಗ್ಗೆ ತಿಳಿದು ಕೊಂಡರು. 

1 Youtube
2. Affiliate Marketing

ಆ ಸಮಯದಲ್ಲೇ umer qureshi ಯೌಟ್ಯೂಬ್ ಬಗ್ಗೆ ಸರಿಯಾಗಿ ತಿಳಿದುಕೊಂಡ ಮತ್ತು Youtube ನಲ್ಲಿ ವೀಡಿಯೋಸ್ ಗಳನ್ನೂ ಹಾಕಲು ಪ್ರಾರಂಭಿಸಿದ.  2 ಕ್ಕೂ  ಅಧಿಕ Youtube Channel ಗಳು ಮಾಡಿದರು. ಆದರೆ ಅವರಿಗೆ ತಮ್ಮ ಮನೆಯವರಿಂದ ಬೆಂಬಲ ಸಿಗಲಿಲ್ಲ. ಆದರೂ ಅವರು ಯಾರಿಗೂ ಗೊತ್ತಾಗದಂತೆ ಮೂಲೆಯಲ್ಲೋ ಅಥವಾ ಶೌಚಾಲಯ ದಲ್ಲಿ ಕೂಡ ಹೋಗಿ ವಿಡಿಯೋ ರೆಕಾರ್ಡ್ ಮಾಡಿ Youtube ಗೆ ಹಾಕುತ್ತಿದ್ದರು 

2017 ರಲ್ಲಿ, ತಮ್ಮ ಎಲ್ಲಾ Youtube Channel ಗಳು ವಿಫಲವಾದಾಗ, ಅವರು ಇನ್ನೊಂದು ಮಾರ್ಗದಿಂದ ಹಣ ಮಾಡಲು ಯೋಚಿಸಿದರು ಅಂದರೆ Affiliate Marketing ಮಾಡಲು ಪ್ರಾರಂಭಿಸಿದರು

Affiliate marketing ಆರಂಭಿಸಿದ ಕೆಲ ದಿನಗಳ ನಂತರ  ಅವರಿಗೆ ಯಾವುದೇ ರೀತಿಯ ಲಾಭ ಸಿಗದ ಕಾರಣ ನನ್ನಲ್ಲಿ ಮಾತ್ರ ಏನು ಕೊರತೆ ಇದೆ ಎಂದು ಯೋಚಿಸಿ ಖಿನ್ನತೆಗೊಳಗಾದ.

ಸ್ಕೂಲ್ ಕಾಲೇಜ್ ಗೆ ಎಷ್ಟು ಹಣ ಹೂಡಿಕೆ ಮಾಡಿದ್ದೇವೆ, ಇಲ್ಲಿ ಏಕೆ ಮಾಡಬಾರದು ಎಂದು ಯೋಚಿಸಿದ Umer. ಒಂದು ದಿನ ಮನೆಯಲ್ಲಿ  ಎಲ್ಲರೂ ಮಲಗಿದ್ದಾಗ ಆತನ ತಂದೆಯ Debit Card ನಿಂದ Affiliate marketing ಆನ್ಲೈನ್ ಕೋರ್ಸ್ ಖರೀದಿಸಿದ. ಈ ವಿಷಯ ಯಾರಿಗೂ ಗೊತ್ತಾಗದಂತೆ ಹಣ ಕಡಿತದ ಮೆಸೇಜ್ ಕೂಡ ಡಿಲೀಟ್ ಮಾಡಿದ.

Affiliate marketing ಕಲಿತ ಬಳಿಕ ಆತ ತುಂಬಾ ಕಷ್ಟ ಪಟ್ಟು ಕೆಲಸ ಮಾಡಿದ. ಇದರಿಂದ 1,500 ರೂಪಾಯಿ ಒಂದೇ ದಿನದಲ್ಲಿ ಸಂಪಾದನೆ ಮಾಡಿದ. ಇದರಿಂದಾಗಿ Umer ಗೆ ತುಂಬಾ ಸಂತೋಷ ವಾಯಿತು. ಮತ್ತು  Umer ಇಷ್ಟು ಹಣ ಯಾರು ಬೇಕಾದರೂ ಸಂಪಾದನೆ ಮಾಡಬಹುದು ಎಂದುಕೊಂಡ. ಆದರೆ Umer ಗೆ ಆ ಹಣ ಕಡಿಮೆಯಾಗಿರಲಿಲ್ಲ.

ಅದೇ ಸಮಯದಲ್ಲಿ ಗೋವಾ ದಲ್ಲಿ Saurabh Bhatnagar ರವರ Digital marketing ಇವೆಂಟ್ ಇತ್ತು. Umer ಗೆ ಆ ಒಂದು ಇವೆಂಟ್ ಗೆ ಹೋಗಲು ತುಂಬಾ  ಆಸಕ್ತಿ ಇತ್ತು ಮತ್ತು ಅವರ ತಂದೆ ಕೂಡ ಆತನಿಗೆ ಗೋವಾ ಗೆ ಕಳುಹಿಸಲು ಒಪ್ಪಿದರು. ಆದರೆ ಅವರ ತಾಯಿ ನಿರಾಕರಿಸಿದರು. ಆದ್ದರಿಂದ ಅವನಿಗೆ ಗೋವಾ ಗೆ ಹೋಗಲು ಆಗಲಿಲ್ಲ.

ಅದಾದ ನಂತರ ಕೆಲವೇ ದಿನಗಳಲ್ಲಿ  Saurabh Bhatnagar ರವರೆ Umer ರವರ ಹೋಂ ಟೌನ್ ಡೆಲ್ಲಿ ಯಲ್ಲಿ ತಮ್ಮ ಇವೆಂಟ್ Organize ಮಾಡ್ತಾರೆ. ಇದನ್ನು ಕೇಳಿ Umer ಗೆ ತುಂಬಾ ಖುಷಿ ಯಾಯಿತು ಆದರೆ  ಇವೆಂಟ್ ಗೆ ಅಟೆಂಡ್ ಆಗಲು ಆತನ ಬಳಿ ಹಣ ಇರಲಿಲ್ಲ. ಆದ್ದರಿಂದ ಉಮರ್ ತಮ್ಮ ಸ್ನೇಹಿತರಿಂದ ಹಣ ಪಡೆದು  Saurabh Bhatnagar ರವರ ಡಿಜಿಟಲ್ ಮಾರ್ಕೆಟಿಂಗ್ ಟ್ರೇನಿಂಗ ಇವೆಂಟ್ ಗೆ ಅಟೆಂಡ್ ಆದ.

ಆ ಸಮಯ ಅಲ್ಲಿ Umer ತಮ್ಮ ತಂದೆ-ತಾಯಿ ಯವರಿಗೆ ಹೇಳದೇ  ಇವೆಂಟ್ ಗೆ ಅಟೆಂಡ್ ಆದರೂ ಅವರು Affiliate marketing  ಬಗ್ಗೆ ಸಾಕಷ್ಟು ಮಾಹಿತಿ ತಿಳಿದು ಕೊಂಡರು ಈ ಕಾರ್ಯಕ್ರಮಕ್ಕೆ ಕುಟ್ಟಾಗಿ ಹೋಗಿದ್ದರಿಂದ ಆತನ ಮನೆಯವರಿಗೂ ಕೂಡ ಉಮರ್ ಬಗ್ಗೆ ಕುತೂಹಲ ಮೂಡಿತು. ನಮ್ಮ ಮಗ ಎಂದಾದ್ರೂ ಮಾಡ್ತಾನೆ ಅನ್ನುವ ಭರವಸೆ ಅವರಲ್ಲಿ  ಮೂಡಿತು

ಅದಾದ ನಂತರ ಉಮರ್ ಒಂದೇ ತಿಂಗಳಲ್ಲಿ Affiliate marketing  ನಿಂದ 25,000 ರೂಪಾಯಿ ಗಳಿಸಿದ್ರು . ಅದರಲ್ಲಿ 10,000 ಆತನ ಸ್ನೇಹಿತನಿಗೆ ಮರು ಪಾವತಿಸಿದ ಮತ್ತು ಉಳಿದ 15,000 ತಮ್ಮ ಮನೆಯವರಿಗೆ ಕೊಟ್ಟಿದ್ದ 

ಆ ದಿನ Umer qureshi ಗೆ ಅರ್ಥ ವಾಯಿತು ನಾವು ಈ ಸಮಾಜದಲ್ಲಿ ಬದುಕಬೇಕಾದರೆ ಏನಾದರೂ ದೊಡ್ಡ ಕೆಲಸ ಮಾಡಲೇಬೇಕು ಅಂತ.

ಒಂದು ಸಮಯದಲ್ಲಿ 1,500 ಗಳಿಸುತ್ತಿದ್ದ Umer ಈಗ ಆತನ ವಾರ್ಷಿಕ ಗಳಿಕೆ ಬರೋಬ್ಬರಿ 50 ಲಕ್ಷಕ್ಕೆ ಏರಿದೆ.

Umer qureshi ಅವರ ಬ್ಲಾಗ್/ವೆಬ್ಸೈಟ್ 

ಇಂದು Umer qureshi ಅವರು -4-5 ಬ್ಲಾಗ್ ವೆಬ್ಸೈಟ್ಸ್ ಗಳನ್ನ ಹೊಂದಿದ್ದಾರೆ ಮತ್ತು ಅವುಗಳನ್ನು  ನಿರ್ವಹಿಸಲು ಒಂದು ಟೀಮ್ ಕೂಡ ಇದೆ.

ಅಷ್ಟೇ ಅಲ್ಲ Umer qureshi ಅವರು ತನ್ನ ಜ್ಞಾನವನ್ನು ಇತರರಿಗೆ ಹರಡಿಸಲು umerqureshi.com ಎಂಬ  ವಿಶ್ವ ವಿದ್ಯಾಲಯ ಸಹ ರಚನೆ ಮಾಡಿದ್ದಾರೆ. ತುಂಬಾ ಕಡಮೆ ದರದಲ್ಲಿ ಅವರು ವಿದ್ಯಾರ್ಥಿ ಗಳನ್ನ ಟ್ರೇನಿಂಗ ಕೊಡ್ತಾಯಿದಾರೆ. ಮತ್ತೆ ಆ ಎಲ್ಲಾ ವಿದ್ಯಾರ್ಥಿಗಳೂ ಕೂಡ ಸ್ವತಃ ಕಲಿಯುವುದಲ್ಲದೆ ಬೇರೆಯವರಿಗೂ ಕಲಿಸುತ್ತಿದ್ದಾರೆ.

ಇಂದು Umer qureshi ಅವರ ಜನಪ್ರಿಯ ಮಾತುಗಳನ್ನ ಕೇಳಿದ ನಂತರ, ಬೇರೆಯವರಿಗೆ ನಮ್ಮ ಕಠಿಣ  ಮಾತುಗಳಿಂದಲ್ಲ , ಕಠಿಣ ಪರಿಶ್ರಮ ದಿಂದ ಉತ್ತರ ಕೊಡಬೇಕು.

2023 ರಲ್ಲಿ Umer qureshi ಅವರ ಅಂದಾಜು ಮೌಲ್ಯ 1-2 ಕೋಟಿ

ನೀವು ಸಹ ಕಂಪ್ಯೂಟರ್ ಅಥವಾ ಮೊಬೈಲ್ ನಿಂದ ಇಂಟರ್ನೆಟ್ ಮುಖಾಂತರ ಏನಾದರೂ ಕಲಿಬೇಕು, ಏನಾದರೂ ದೊಡ್ಡ ಸಾಧನೆ ಮಾಡಬೇಕು, ಎಂಬ ಛಲ ಇದ್ದಲ್ಲಿ ನಮಗೆ ಕಾಮೆಂಟ್ ಮಾಡಿ ತಿಳಿಸಿ. ಮತ್ತೆ ನಮ್ಮ ಈ ವೆಬ್ಸೈಟ್ ನಲ್ಲಿ ಇದೆ ತರ ಆನ್ಲೈನ್ ನಲ್ಲಿ ದುಡ್ಡು ಮಾಡುವ ವಿಧಾನ ಗಳ ಬಗ್ಗೆ ಆರ್ಟಿಕಲ್ ಸಿಗುತ್ತವೆ. So Stay connected with digit words.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು